ಮಣಿಪಾಲ್ ಆಸ್ಪತ್ರೆಯಲ್ಲಿ ನಟಿ ನಿಧನರಾಗಿದ್ದಾರೆ. ದೆಹಲಿ ನಾಟಕ ಶಾಲೆಯಲ್ಲಿ ರಂಗ ಅಧ್ಯಯನ ಮಾಡಿರುವ ಅವರು ಹಲವಾರು ನಾಟಕ ರಚಿಸಿ ನಿರ್ದೇಶಿಸಿದ್ದಾರೆ. ಅಲ್ಲದೇ ಚಲನಚಿತ್ರದಲ್ಲೂ ನಟಿಸಿದ್ದಾರೆ. ಖ್ಯಾತ ನಾಟಕಕಾರರೂ ನಿರ್ದೇಶಕರೂ ಆದ ಎಸ್. ಮಾಲತಿ ಇನ್ನಿಲ್ಲ. ಅಲ್ಪ ಕಾಲದ ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟರು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಎಸ್. ಮಾಲತಿ, ಸಮುದಾಯ ರಂಗ ಚಳವಳಿಗೆ ಸಾಕಷ್ಟು ಶಕ್ತಿ ತುಂಬಿದ್ದರು.ಜನಮ್ ತಂಡದ ಸಫ್ದರ್ ಹಷ್ಮಿ ರಚಿಸಿದ ನಾಟಕಗಳನ್ನು ಕನ್ನಡ ಬೀದಿ