ಇಂದಿರಾ ಕ್ಯಾಂಟೀನ್ ಆಯ್ತು, ಅಪ್ಪಾಜಿ ಕ್ಯಾಂಟೀನ್ ಆಯ್ತು. ಇದೀಗ ನಟಿ ಮಾಜಿ ಸಂಸದೆ ರಮ್ಯ ಕ್ಯಾಂಟೀನ್ ಆರಂಭವಾಗಿದೆ. ಮಾಜಿ ಸಂಸದೆ ರಮ್ಯಾ ಅಭಿಮಾನಿಯಾಗಿರುವ ರಘು ಎನ್ನುವವರು ರಮ್ಯಾ ಕ್ಯಾಂಟಿನ್ ಆರಂಭಕ್ಕೆ ಚಾಲನೆ ನೀಡಿದ್ದಾರೆ. ನಾಳೆಯಿಂದ ಅಶೋಕನಗರದಲ್ಲಿ ರಮ್ಯಾ ಕ್ಯಾಂಟೀನ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ರಮ್ಯಾ ಕ್ಯಾಂಟೀನ್ನಲ್ಲಿ 10 ರೂಪಾಯಿಗಳಿಗೆ ಊಟ ತಿಂಡಿ ದೊರೆಯಲಿದೆ ಎಂದು ರಮ್ಯಾ ಕ್ಯಾಂಟೀನ್ ಮಾಲೀಕರಾದ ರಘು ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್