ನಟಿ ರಮ್ಯಾ ಇಡ್ಲಿ ಪ್ರೀತಿ ನೋಡಿ ನೀರೂರಿಸಿಕೊಂಡ ಹಿಂಬಾಲಕರು!

ಬೆಂಗಳೂರು, ಶನಿವಾರ, 3 ಫೆಬ್ರವರಿ 2018 (10:27 IST)

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಟ್ವೀಟ್ ಮಾಡುತ್ತಿರುತ್ತಾರೆ. ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯಾಗೆ ಇದು ಕರ್ತವ್ಯವವೂ ಹೌದು.
 

ಆದರೆ ಇವತ್ತು ಅದೇನಾಯ್ತೋ.. ರಮ್ಯಾ ಮೇಡಂಗೆ ಇಡ್ಲಿ ಮೇಲೆ ಪ್ರೀತಿ ಉಕ್ಕಿ ಹರಿದಿದೆ. ಅದಕ್ಕೇ ಬೆಂಗಳೂರಿನ ಬ್ರಾಹ್ಮಣರ ಕಾಫಿ ಬಾರ್ ನ ಇಡ್ಲಿ, ಕಾಫಿ ನೆನೆಸಿಕೊಂಡಿದ್ದಾರೆ.
 
ಅದರ ಫೋಟೋಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿ, ನಗರದ ಅತ್ಯುತ್ತಮ ಉಪಾಹಾರ. ಮೃದುವಾದ, ರುಚಿಯಾದ ಇಡ್ಲಿ ಎಂದು ರಮ್ಯಾ ಬಾಯಿ ಚಪ್ಪರಿಸಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳೂ ರಮ್ಯಾಗೆ ಜೈ ಎಂದಿದ್ದಾರೆ. ಅಷ್ಟೇ ಅಲ್ಲ, ನಗರದ ಇತರ ಬೆಸ್ಟ್ ಉಪಾಹಾರದ ಹೋಟೆಲ್ ಗಳನ್ನೆಲ್ಲಾ ಪಟ್ಟಿ ಮಾಡಿಕೊಟ್ಟಿದ್ದಾರೆ. ಅಂತೂ ಅಪರೂಪಕ್ಕೆ ರಾಜಕೀಯ ಬಿಟ್ಟು ಬೇರೆ ಟ್ವೀಟ್ ಮಾಡಿದ್ದಕ್ಕೆ ಅಭಿಮಾನಿಗಳೂ ಖುಷ್ ಆಗಿದ್ದಾರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆನಂದಸಿಂಗ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ

ಬಿಜೆಪಿ ಮಾಜಿ ಶಾಸಕ ಆನಂದಸಿಂಗ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.

news

ಚುನಾವಣೆಯಲ್ಲಿ ಸೋತರೆ ಜೆಡಿಎಸ್ ಅಭ್ಯರ್ಥಿ ಮನೆಯಲ್ಲಿ ಜೀತಕ್ಕಿರುತ್ತೇನೆ...

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್ ಪಕ್ಷದ ವೀರಭದ್ರಯ್ಯ ಮನೆಯಲ್ಲಿ ಜೀತಕ್ಕಿರುತ್ತೇನೆ ...

news

ಕೆಎಸ್ ಆರ್ ಟಿಸಿ ಬಸ್ ನಲ್ಲಿನ್ನು ನಿಮ್ಮ ಪಕ್ಕದ ಸೀಟ್ ನಲ್ಲಿ ನಾಯಿಯೂ ಕೂರಬಹುದು!

ಬೆಂಗಳೂರು: ಇದುವರೆಗೆ ನಿಮ್ಮ ಪ್ರೀತಿ ಪಾತ್ರ ಸಾಕು ಪ್ರಾಣಿಗಳನ್ನು ಕೊಂಡೊಯ್ಯುವಾಗ ಕಂಡಕ್ಟರ್ ನಿಂದ ಕಿರಿ ...

news

ರಾಜ್ಯ ಸರ್ಕಾರದ ಯೂನಿವರ್ಸಲ್ ಹೆಲ್ತ್ ಕಾರ್ಡ್: ಯಾರೆಲ್ಲಾ, ಹೇಗೆ ಪಡೆಯಬಹುದು?

ಬೆಂಗಳೂರು: ಕೇಂದ್ರ ಸರ್ಕಾರ ತನ್ನ ಈ ಸಾಲಿನ ಬಜೆಟ್ ನಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ 5 ...