ಜೈಲಿನಲ್ಲಿರುವ ಎಲ್ಲ ಕೈದಿಗಳೂ ಸಮಾನ, ಯಾರಿಗೂ ವಿಶೇಷ ಸೌಲಭ್ಯ ಒದಗಿಸುವಂತಿಲ್ಲ ಎಂದು ಕಾರಾಗೃಹದ ಎಡಿಜಿಪಿ ಎನ್.ಎಸ್. ಮೇಘರಿಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದ್ದ ಮೇಘರಿಕ್, ಜೈಲಿನಲ್ಲಿ ಪರಿಶೀಲನೆ ನಡೆಸಿ ಸಿಬ್ಬಂದಿಗೆ ಖಡಕ್ ಸೂಚನೆ ಕೊಟ್ಟರು. ಒಂದೇ ಅಡುಗೆ ಮನೆಯಲ್ಲಿ ಎಲ್ಲರಿಗೂ ಊಟ ತಯಾರಾಗಬೇಕು. ಜೈಲಿನಲ್ಲಿ ಎಲ್ಲರೂ ಸಮಾನರು. ಯಾರಿಗೂ ವಿಶೇಷ ಸೌಲಭ್ಯ ನೀಡುವಂತಿಲ್ಲ ಎಂದು ಸೂಚಿಸಿದರು.ಇದೇವೇಳೆ, ಕೈದಿಗಳ ಭೇಟಿಗೆ ಬರುವವರ ಬಳಿ ಹಣ ಪಡೆದರೆ