ಹಾಸನ : ಈ ಹಿಂದೆ ಬಿಎಸ್ವೈ ಅಧಿಕಾರಕ್ಕೆ ಬಂದಾಗಲೇ ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿತ್ತು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ಅವರಿಗೆ ಸಲಹೆಯೊಂದನ್ನು ನೀಡುತ್ತಾ, ಸಚಿವ ಸಂಪುಟ ರಚನೆಯಾಗದೇ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೋ ಇಲ್ಲವೋ. ಈ ನಷ್ಟವನ್ನು ಅಂದಾಜು ಮಾಡಲು ಒಂದು ತಿಂಗಳಿಗೂ ಹೆಚ್ಚು ಕಾಲವಾಗಬಹುದು. ಅಧಿಕಾರಿಗಳ ಸ್ಥಳ ನಿಯೋಜನೆ ಬಿಡ್ಡಿಂಗ್ನ್ನು ಈ ಸಮಯದಲ್ಲಿ ಮುಂದಕ್ಕೆ ಹಾಕಿ.