ಬೆಳ್ಳಂದೂರು ಬಳಿಕ ಈಗ ಕೆಂಗೇರಿ ಬಳಿಯ ಹೊಸಕೆರೆಯಲ್ಲೂ ನೊರೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಬಹುತೇಕ ತುಂಬಿದ್ದು ನೀರು ಹರಿಯುತ್ತಿದೆ. ಈ ಹರಿಯುವ ನೀರಿನಲ್ಲಿ ನೊರೆಯ ರಾಶಿರಾಶಿ ಕಾಣಿಸಿಕೊಂಡಿದ್ದು, ರಾಜಕಾಲುವೆಯ ಮೂಲಕ ಇಡೀ ಪ್ರದೇಶದಲ್ಲಿ ಪಸರಿಸುತ್ತಿದ್ದು ಅನಾರೋಗ್ಯದ ಭೀತಿ ಹೆಚ್ಚಾಗಿದೆ.ತ್ಯಾಜ್ಯ ನೀರು ಕೆರೆ ಸೇರುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲು ದುರ್ನಾತ ಬೀರುತ್ತಿದೆ. ಇದರಲ್ಲಿ ವಿಷಕಾರಿ ರಾಸಾಯನಿಕಗಳೂ ಸೇರಿರುವ ಕಾರಣ ಈ ರೀತಿ ನೊರೆ