ಬೆಂಗಳೂರು : ನಾಡಿನ ಗೃಹಿಣಿಯರಿಗೆ ಮತ್ತೆ ಟೊಮೆಟೊ ದರ ಏರಿಕೆ ಶಾಕ್ ಕೊಟ್ಟಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಟೊಮೆಟೊ ಬೆಲೆಯಂತೋ 200ರ ಗಡಿಯತ್ತ ಓಡುತ್ತಿದೆ. ಇಷ್ಟು ದಿನ 100 ರ ಆಸುಪಾಸಿನಲ್ಲಿ ಇದ್ದಂತಹ ಟೊಮೆಟೊ ದರ ಇದ್ದಕ್ಕಿಂದ್ದಂತೆ 140-160 ರೂಗೆ ಜಿಗಿದಿದೆ. ಮತ್ತೆ ಕೆಲವು ಕಡೆ 200 ರೂ. ಗಡಿ ತಲುಪಿದೆ. ಟೊಮೆಟೊ ಮಾರಾಟಗಾರರಿಗೆ ಶುಕ್ರದೆಸೆ, ಗ್ರಾಹಕರಿಗೆ ವಕ್ರದೆಸೆಯಂತಾಗಿದೆ.ಟೊಮೆಟೊ ಬಿತ್ತನೆ ಕಡಿಮೆಯಾಗಿದ್ದು ದರ ಏರಿಕೆಯಾಗಿದೆ.