ಬೆಂಗಳೂರು: 1990 ರ ಕಾಲದಲ್ಲಿ ಬೆಂಗಳೂರು ನೋಡಿದವರಾಗಿದ್ದರೆ, ಇಲ್ಲಿ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್ ಗಳ ನೆನಪಿರಬಹುದು. ಅದು ಮತ್ತೆ ರಾಜಧಾನಿಯ ರಸ್ತೆಗಳಲ್ಲಿ ಓಡಾಡಲಿದೆಯಂತೆ!ಹೌದು. ಡಬಲ್ ಡೆಕ್ಕರ್ ಬಸ್ ನ ಮೇಲಂತಸ್ತಿನ ಸೀಟ್ ನಲ್ಲಿ ಕುಳಿತುಕೊಳ್ಳಲು ಅದೆಷ್ಟು ಜನ ಹಾತೊರೆಯುತ್ತಿದ್ದರು. ಮೇಲೆ ಕುಳಿತು ಜಮ್ಮೆಂದು ಪ್ರಯಾಣ ಮಾಡುವ ಕನಸು ಈ ವರ್ಷಾಂತ್ಯಕ್ಕೆ ನನಸಾಗುವ ನಿರೀಕ್ಷೆಯಿದೆ.ಈ ವರ್ಷಾಂತ್ಯದ ವೇಳೆಗೆ ಐದು ಅಥವಾ ಆರು ಡಬಲ್ ಡೆಕ್ಕರ್ ಬಸ್ ಗಳನ್ನು ಖರೀದಿಸುವ ಇರಾದೆ