ಬೆಂಗಳೂರು: ಮಳೆಗಾಲ ಮುಗಿದು ಚಳಿಗಾಲ ಬರುವ ಸಮಯವಾದರೂ ರಾಜ್ಯ ರಾಜಧಾನಿಯಲ್ಲಿ ಮಳೆ ನಿಂತಿಲ್ಲ. ವಾರದ ಬಿಡುವಿನ ನಂತರ ಮಳೆ ಅಬ್ಬರಿಸಿದ್ದು ಜನ ಜೀವನ ಮತ್ತೆ ಸಂಕಷ್ಟಕ್ಕೀಡಾಗಿದೆ. ಈ ಬಾರಿ ಬೆಂಗಳೂರಲ್ಲಿ ದಾಖಲೆಯ ಮಳೆಯಾಗಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಇದರಿಂದಾಗಿ ಬೆಂಗಳೂರಿನ ಚರಂಡಿ ವ್ಯವಸ್ಥೆ, ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮನೆಯೊಳಗೇ ಕೊಳಚೆ ನೀರು ನುಗ್ಗುತ್ತಿದೆ.ನಿನ್ನೆ ಮಧ್ಯಾಹ್ನದಿಂದ ತಡರಾತ್ರಿವರೆಗೆ ಮಳೆ ಸುರಿದಿದ್ದರಿಂದ ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ವಿವಿಪುರಂ, ವಿಜಯನಗರ ಸೇರಿದಂತೆ