ಮಿಲ್ಕಾರ್ ಪೇಟೆಯ ಸಮಸ್ಯೆಗಾಗಿ ಅಲ್ಲಿನ ಜನರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬಳ್ಳಾರಿ ನಗರದ ಮಿಲ್ಕಾರ್ ಪೇಟೆಯ ಮುಖ್ಯರಸ್ತೆಯನ್ನು ಸರಿಪಡಿಸಲು ಆಗ್ರಹಿಸಿ ಕರ್ನಾಟಕ ಜನಸೈನ್ಯ ಸಂಘಟನೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಲಿದೆ.ನಗರದ ಮಿಲ್ಲಾರಪೇಟೆ ಯಿಂದ ಅಂದಾಳ್ ರಸ್ತೆ ಹದಗೆಟ್ಟು 15 ವರ್ಷಗಳಾದರೂ ದುರಸ್ತಿಮಾಡದಿರುವುದನ್ನು ಖಂಡಿಸಿ ಕರ್ನಾಟಕ ಜನಸೈನ್ಯ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಅಗಮಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಹೋರಾತ್ರಿ ಧರಣಿಯ ಜೊತೆ ಸತ್ಯಾಗ್ರಹ ಉಗ್ರರೂಪ ಪಡೆಯಲಿದೆ