ಚಿಕ್ಕಬಳ್ಳಾಪುರ : ಕಡಿಮೆ ಇಂಧನ ಉಗುಳುವ, ದೇಶದಲ್ಲೇ ಮೊದಲ ಪರಿಸರ ಸ್ನೇಹಿ ಬೋಯಿಂಗ್ ವಿಮಾನವನ್ನು ಆಕಾಶ ಏರ್ಲೈನ್ಮಂಗಳವಾರ ಪರಿಚಯಿಸಿದೆ. ಪರಿಸರ ಸ್ನೇಹಿ ಬೋಯಿಂಗ್ 737 MAX, 737-8-200 ವಿಮಾನವು ಇಂದು ಬೆಳಗ್ಗೆ 9:31ಕ್ಕೆ ಬೆಂಗಳೂರಿಗೆ ಆಗಮಿಸಿತು. ಈ ನೂತನ ವಿಮಾನ ಅಮೆರಿಕದ ಸಿಯಾಟಲ್ನಿಂದ ಹೊರಟು ಇಂದು ಬೆಂಗಳೂರಿಗೆ ಬಂದು ತಲುಪಿದೆ.ಕಳೆದ ವರ್ಷದ ತನ್ನ ವಿಮಾನಯಾವನ್ನು ಪ್ರಾರಂಭಿಸಿದ ಆಕಾಶ ವಿಮಾನ ಸಂಸ್ಥೆಯು ಒಂದು ವರ್ಷದೊಳಗೆ 20 ವಿಮಾನವನ್ನು ವಿವಿಧ ಮಾರ್ಗಗಳಿಗೆ ತೆರೆದಿದೆ.