ಮೈಲಾರ ಕ್ಷೇತ್ರದಲ್ಲಿ ಪ್ರತಿವರ್ಷ ಕಾರ್ಣಿಕ ಹೇಳುವ ಕಾರ್ಣಿಕರನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ಸುದ್ದಿಗೋಷ್ಠಿ ನಡೆಸಿದರು.ಬಳ್ಳಾರಿ ಜಿಲ್ಲೆ ಮೈಲಾರ ಕ್ಷೇತ್ರದಲ್ಲಿ ಪ್ರತಿವರ್ಷವೂ ಕಾರ್ಣಿಕ ಹೇಳುವ ಕಾರ್ಣಿಕರನ್ನ ಬದಲಾಯಿಸಿದ ಹಿನ್ನೆಲೆಯಲ್ಲಿ ಗದಗನಲ್ಲಿ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಸುದ್ದಿಗೋಷ್ಠಿ ನಡೆಸಿದರು. ಮೈಲಾರ ಕ್ಷೇತ್ರದ ಧರ್ಮಾಧಿಕಾರಿ ವೆಂಕಪ್ಪಯ್ಯ ಕಾರ್ಣಿಕರ ವಿಚಾರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದೂ ಮಂಜಪ್ಪ ಎಂಬೋರನ್ನ ಕಾರ್ಣಿಕರನ್ನಾಗಿ ನೇಮಿಸಿರುವುದು ಸಂಜಸವಲ್ಲ ಎಂದರು.ಮಂಜಪ್ಪ ಎನ್ನುವವರು ಮದ್ಯವ್ಯಸನಿ ವ್ಯಕ್ತಿಯಾಗಿದ್ದು ಚಾರಿತ್ರ್ಯ ಹೀನರಾಗಿದ್ದಾರೆ.