ನಿಮ್ಮ ನಿಮ್ಮ ಜಿಲ್ಲೆಯ ಹಿತವನ್ನು ರಕ್ಷಿಸಲು, ಜನರ ಸಮಸ್ಯೆ ಆಲಿಸಲು ನೀವೆಷ್ಟು ಸಫಲರಾಗಿದ್ದೀರಿ? ಎಂದು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭ ಎಂಬುದೂ ನಿಮಗೆ ಗೊತ್ತಿರಲಿ. ಹೀಗಂತ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯುಕ್ತ ಸೂಚನೆ ನೀಡಿದ್ದಾರೆ.ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿಗೆ ಸಜ್ಜಾಗುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯ ಕಾರ್ಯದರ್ಶಿಗಳು, ಬರ ಪರಿಹಾರ ಕಾಮಗಾರಿಗಾಗಿ ಈಗಾಗಲೇ ರೂಪಿಸಲಾಗಿರುವ