ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಒಟ್ಟಿಗೆ ತೆರೆ ಮೇಲೆ ನೋಡಬೇಕು ಎಂಬ ಆಸೆ ಅಭಿಮಾನಿಗಳದ್ದು. ಹಾಗೆ ಒಳ್ಳೆಯ ಕಥೆ ಸಿಕ್ಕರೆ ಇಬ್ಬರೂ ಒಟ್ಟಿಗೆ ನಟಿಸುತ್ತೇವೆ ಎಂದು ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಹೇಳಿಕೊಂಡಿದ್ದರು. ಈಗ ಅಭಿಮಾನಿಗಳಿ ಕನಸು ನನಸಾಗುವ ಸೂಚನೆ ಸಿಕ್ಕಿದೆ. ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ನಟನೆಯ ಸಿನಿಮಾಗಳ ಹವಾ ಹೆಚ್ಚಾಗಿದೆ. ಸುದೀಪ್, ಶಿವರಾಜ್ ಕುಮಾರ್ `ದಿ ವಿಲನ್ ಮೂಲಕ ಒಟ್ಟಿಗೆ ಕಾಣಿಸಿಕೊಂಡಿದ್ದು,