ಮಂಗಳೂರಿನಲ್ಲಿ ಗಲಾಟೆ ಮಾಡುವವರು ಬೇರೆ ಕಡೆಯಿಂದ ಬಂದವರಲ್ಲ. ಗಲಾಟೆ ಮಾಡುವವರು ನಮ್ಮಲ್ಲಿಯೇ ಇದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ. ಬಿಜೆಪಿ ನಾಯಕರು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಚಿವರ ರಾಜೀನಾಮೆ ಬೇಡುವ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು, ದಕ್ಷಿಣ ಕನ್ನಡದಲ್ಲಿ ನಡೆದ ಗಲಭೆಗಳಲ್ಲಿ ಮತೀಯ ಶಕ್ತಿಗಳ ಕೈವಾಡವಿರುವುದು ಕಂಡು ಬಂದಿದೆ. ಅಪರಾಧ ಕೃತ್ಯಗಳಲ್ಲಿ