ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಪಣತೊಟ್ಟಿದ್ದಾರೆ. ಮೈತ್ರಿ ಸರಕಾರ ಅಲುಗಾಡುತ್ತಿದೆ. ಆದ್ರೆ ರಾಜೀನಾಮೆಗೆ ಸಿದ್ಧರಾಗಿರುವ 12 ಕ್ಕೂ ಹೆಚ್ಚು ಶಾಸಕರ ನಡೆ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ನ 8, ಜೆಡಿಎಸ್ ನ ನಾಲ್ವರು ರಾಜೀನಾಮೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹರಿದಾಡಲಾರಂಭಿಸಿವೆ. ಬಿಜೆಪಿ ನಾಯಕರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ ಶಾಸಕರು ಎನ್ನಲಾಗಿದೆ.ಕೇಂದ್ರದಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದೆ. ಈ ಹಿನ್ನೆಲೆ ತಮ್ಮ ರಾಜೀನಾಮೆ ನಿರ್ಧಾರ ಗಟ್ಟಿ ಮಾಡಿಕೊಂಡಿದ್ದಾರೆ ಹಲವು ಶಾಸಕರು