ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಮೈತ್ರಿ ಸರ್ಕಾರದ ಪ್ರಮುಖ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಸೋಮವಾರ ಮಹಾನಗರ ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್ ಚಾಲನೆ ನೀಡಿದರು. ವಸ್ತು ಪ್ರದರ್ಶನವು ಜ. 06 ಬುಧವಾರದವರೆಗೆ ಇರಲಿದೆ. ವಸ್ತು ಪ್ರದರ್ಶನದಲ್ಲಿ ಮೈತ್ರಿ ಸರ್ಕಾರದ ಪ್ರಮುಖ ಜನಪರ ಯೋಜನೆಗಳು ಚೆನ್ನಾಗಿ ಅನಾವರಣಗೊಂಡಿವೆ. ಬೇರೆ ಬೇರೆ ಗ್ರಾಮಗಳಿಂದ ಬಸ್ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಸಾರ್ವಜನಿಕರು ವಸ್ತು