ಅಮರ್ ಟೀಸರ್ ಬಿಡುಗಡೆ; ಅಂಬಿ ಅಭಿಮಾನಿಗಳಿಂದ ಸಂಭ್ರಮ

ಮಂಡ್ಯ, ಗುರುವಾರ, 14 ಫೆಬ್ರವರಿ 2019 (15:30 IST)

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ ಅಮರ್ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದ್ದು, ಅಂಬಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಅಮರ್ ಸಿನಿಮಾದ ಟೀಸರ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಅಂಬಿ ಅಭಿಮಾನಿಗಳು ಅಭಿಷೇಕ್ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ನಿಡಘಟ್ಟ ಬಳಿ ಅಭಿಷೇಕ್, ಅಂಬರೀಷ್, ಸುಮಲತಾ ಇರುವ ಬ್ಯಾನರ್‌ಗೆ  ಹೂವಿನಿಂದ ಅಲಂಕಾರ ಮಾಡಿದ ಅಭಿಮಾನಿಗಳು, ನಂತರ ಹಾಲಿನ ಅಭಿಷೇಕ ಮಾಡಿದರು.

ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಅಂಬರೀಷ್ ಅವರಂತೆ ಅವರ ಮಗ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಾಧಿಸುತ್ತಾರೆ. ಅಮರ್ ಚಿತ್ರ ಸೂಪರ್ ಹಿಟ್ ಆಗೋದ್ರಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆಡು ಭಾಷೆಯೋ – ಆಡಳಿತ ಭಾಷೆಯೋ?

ನವೆಂಬರ್ ತಿಂಗಳು ಬಂತೆಂದರೆ ಸಾಕು ಸರ್ಕಾರ, ಕನ್ನಡಪರ ಸಂಘಟನೆಗಳು ಎಲ್ಲವೂ ಚುರುಕಾಗಿ ರಾಜ್ಯೋತ್ಸವ ಸಭೆ, ...

news

ಶಾಕಿಂಗ್! ಪುಳಿಯೋಗರೆ ಪ್ಯಾಕೆಟ್ ನಲ್ಲಿ ಏನಿತ್ತು ಗೊತ್ತಾ?

ತಮ್ಮ ಮಗನಿಗೆ ಉಪಹಾರ ಸಿದ್ಧಪಡಿಸುತ್ತಿದ್ದಾಗ ಪುಳಿಯೋಗರೆ ಪ್ಯಾಕೇಟ್ ನಲ್ಲಿದ್ದದ್ದನ್ನು ನೋಡಿ ...

news

ಲಂಚ ಪಡೆಯುತ್ತಿದ್ದ ಅಧಿಕಾರಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ!

ಲಂಚ ಪಡೆಯುತ್ತಿದ್ದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

news

ಜೆಡಿಎಸ್ ಕಾರ್ಯಕರ್ತರ ವಿರುದ್ಧ ಬಿಸಿಲೂರಿನಲ್ಲಿ ಬೀದಿಗಿಳಿದ ಬಿಜೆಪಿ

ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ ಖಂಡಿಸಿ ಬಿಸಿಲೂರಿನಲ್ಲಿ ಬಿಜೆಪಿ ...