ಕಲಬುರ್ಗಿ: ದೇವರಿಗೆ ನೀರು ತರಲು ನದಿಗೆ ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ಅಫ್ಜಲ್ ಪುರ ತಾಲೂಕಿನ ತೆಲ್ಲೂರು ಗ್ರಾಮದ ಬಳಿ ಅಮರ್ಜಾ ನದಿಯಲ್ಲಿ ನಡೆದಿದೆ. ತೆಲ್ಲೂರು ನಿವಾಸಿ ಶಾಂತಪ್ಪ ಧರಿಗೊಂಡ ಪುತ್ರ 9ನೇ ತರಗತಿ ಓದುತ್ತಿದ್ದ ಸಾಗರ(16) ಮೃತ ಬಾಲಕ. ಇಂದು ಗ್ರಾಮದ ದೇವತೆ ಜಾತ್ರೆಯಿದ್ದ ಹಿನ್ನೆಲೆ ಮೀಸಲು ನೀರು ತಂದು ದೇವರಿಗೆ ಅಭಿಷೇಕ ಮಾಡಲು ನದಿಗೆ ಹೋಗಿದ್ದ. ಅಮರ್ಜಾ ಡ್ಯಾಂನಿಂದ ಬಿಟ್ಟ ನೀರು ಒಮ್ಮಿಂದೊಮ್ಮಲೆ ಹರಿದು ಬಂದಿರೋದ್ರಿಂದ ನೀರಲ್ಲಿ