ಜಮ್ಮುವಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ ಬೇಸ್ ಕ್ಯಾಂಪ್ ನಿಂದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಶುಕ್ರವಾರ ಸಂಜೆ ಅಮರನಾಥ ಗುಹೆ ಬಳಿ ಭಾರೀ ವರ್ಷಧಾರೆಯಿಂದಾಗಿ ತಾತ್ಕಾಲಿಕವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ಆರ್ಭಟದಿಂದಾಗಿ ಉಂಟಾದ ಪ್ರವಾಹದಿಂದ 16 ಜನರು ಸಾವಿಗೀಡಾಗಿದ್ದರು. ಇದೇ ಸಂದರ್ಭದಲ್ಲಿ 40 ಮಂದಿ ಕಾಣೆಯಾಗಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಅಮರನಾಥದಲ್ಲಿ ಈ ಅನಾಹುತ ಸಂಭವಿಸಿದ್ದರೂ ಯಾತ್ರಾರ್ಥಿಗಳ ಉತ್ಸಾಹ ಸ್ವಲ್ಪವೂ ಕಡಿಮೆಯಾಗಿಲ್ಲ. ಬಂ ಬಂ ಭೋಲೆ ಎಂಬ ಘೋಷಣೆಗಳೊಂದಿಗೆ