ಬೀದರ್ : ಕಲ್ಲಿನ ನಂದಿ ವಿಗ್ರಹ ಹಾಲು ಮತ್ತು ನೀರು ಕುಡಿಯುತ್ತಿರುವ ಸುದ್ದಿ ಹರಡಿದ್ದು, ವಿಸ್ಮಯಕಾರಿ ಘಟನೆ ಕಣ್ತುಂಬಿಕೊಳ್ಳಲು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಗಡಿ ಜಿಲ್ಲೆ ಬೀದರ್ನಲ್ಲಿರುವ ದೇವಸ್ಥಾನದಲ್ಲಿ ವಿಸ್ಮಯವನ್ನು ನೋಡಲು ಭಕ್ತರ ದಂಡೇ ಆಗಮಿಸುತ್ತಿದೆ. ಜಿಲ್ಲೆಯ ಹಲವು ದೇವಸ್ಥಾನಗಳು ಈ ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾಗಿದೆ. ಬೀದರ್ ತಾಲೂಕಿನ ಧೂಮಸಾಪೂರ್, ಮರಕುಂದ, ಕಪಲಾಪೂರ್ ಹಾಗೂ ಚಿಟ್ಟಗುಪ್ಪ ತಾಲೂಕಿನ ನಿರ್ಣಾ, ಮಂಗಲಗಿ ಬಸವಕಲ್ಯಾಣ ತಾಲೂಕಿನಲ್ಲಿ ನಾರಾಯಣಪೂರ್ ಸೇರಿದಂತೆ ಜಿಲ್ಲೆಯ ಹಲವೆಡೆ