ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಕಳ್ಳ ಕಳ್ಳ ಎಂದು ಹೇಳುವ ಮುಖೇಶ್ ಅಂಬಾನಿ ಜತೆಗೆ ಸಚಿವ ಡಿ.ಕೆ. ಶಿವಕುಮಾರ್ ಇರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ಉದ್ಯಮ ದಿಗ್ಗಜ ಮುಖೇಶ್ ಅಂಬಾನಿ ಪುತ್ರಿಯ ಅದ್ದೂರಿ ವಿವಾಹ ನೆರವೇರಿತು. ಈ ವೈಭವೋಪೇತ ಮದುವೆಯಲ್ಲಿ ಗಣ್ಯಾತಿಗಣ್ಯರ ದಂಡೆ ಹರಿದು ಬಂದಿತ್ತು. ಈ ಗಣ್ಯರ ಪೈಕಿ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪಾಲ್ಗೊಂಡು