ಬೆಂಗಳೂರು: ಶನಿವಾರ ನಿಧನರಾದ ಹಿರಿಯ ನಟ ಅಂಬರೀಶ್ ಅಸ್ಥಿ ಸಂಗ್ರಹ, ಹಾಲು ತುಪ್ಪ ಬಿಡುವ ಕಾರ್ಯಕ್ರಮ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಯಲ್ಲಿ ನಡೆಯುತ್ತಿದೆ.ಪುರೋಹಿತರ ಮಾರ್ಗದರ್ಶನದಂತೆ ಅಂಬರೀಶ್ ಪುತ್ರ ಅಭಿಷೇಕ್ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅಂಬರೀಶ್ ಕುಟುಂಬದ ಜತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟ ದೊಡ್ಡಣ್ಣ ಕೂಡಾ ಕಾರ್ಯಗಳಲ್ಲಿ ನೆರವಾಗಿದ್ದಾರೆ.ಅಂಬರೀಶ್ ನಿಧನರಾದ ಸುದ್ದಿ ತಿಳಿದಾಗಿನಿಂದಲೂ ಅಂಬಿ ಕುಟುಂಬದ ಜತೆಗೇ ಇದ್ದ