ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಅಂಬರೀಶ್ ವಾಗ್ದಾಳಿ ನಡೆಸಿರುವುದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಸಚಿವ ಸ್ಥಾನ ನೀಡಲು ಸಾಧ್ಯನಾ? ಅಂಬರೀಶ್ ಹಿರಿಯ ನಟ, ಹಿರಿಯ ರಾಜಕಾರಣಿ. ಅವರು ಇಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬೇಕು ಎಂದಾಗ ಧರಿಸಲು ಬೇಡ ಎಂದಾಗ ಎಸೆಯಲು ನಾನೇನು ಚಪ್ಪಲಿಯಲ್ಲ ಎಂದು ಅಂಬರೀಶ್ ನೀಡಿರುವ ಹೇಳಿಕೆ ತೀರಾ ಕೀಳುಮಟ್ಟದ್ದು. ಇಂತಹ ಮಾತುಗಳು ಅವರಿಗೆ ಶೋಭೆ