ಮಳೆಗಾಲ ಆರಂಭವಾದ್ರೆ ಸಾಕು ಜಲಪಾತಗಳತ್ತ ಪ್ರವಾಸಿಗರು ಮುಖ ಮಾಡತ್ತಾರೆ...ಅದರಲ್ಲೂ ಮೂರು ರಾಜ್ಯಗಳ ಗಡಿಯಲ್ಲಿ ಇರುವ ಆ ಚಲುವೆಯನ್ನ ಕಣ್ಣತ್ತುಂಬಿ ನೋಡಲು ಜನಸಾಗರವೇ ಹರಿದು ಬರುತ್ತದೆ. ಅವಳ ಸೌಂದರ್ಯದ ಸೊಬಗಿನಲ್ಲಿ ಪ್ರತಿಯೊಬ್ಬರು ಮೈಮರೆತು ಹೋಗುತ್ತಾರೆ. ಅದುವೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅಂಬೋಲಿ ಜಲಪಾತ. ಮುಂಗಾರು ಮಳೆ ಆರಂಭವಾದ್ರೆ ಸಾಕು ಪ್ರತಿಯೊಬ್ಬರು ಪ್ರಸಿದ್ಧ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕ್ತಾರೆ. ಯಾಕೇಂದ್ರೆ ಮಳೆಗಾಲದಲ್ಲಿ ಪ್ರಕೃತಿ ಸೊಬಗು, ಜಲಪಾತಗಳ ವೈರಾವನ್ನ ಕಣ್ಣಾರೆ ನೋಡಿ ಆನಂದಿಸಬೇಕೆಂಬ ಹಂಬಲ