ಬೆಂಗಳೂರು: ಮೊನ್ನೆಯಷ್ಟೇ ನಿಧನರಾದ ಹಿರಿಯ ನಟ ಅಂಬರೀಶ್ ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪಿದ್ದು, ಚಿತಾಗಾರದ ಬಳಿ ಬರುತ್ತಿದ್ದಂತೆ ಪತ್ನಿ ಸುಮಲತಾ ಅಂಬರೀಶ್ ಕುಸಿದು ಬಿದ್ದಿದ್ದಾರೆ.ಮೊನ್ನೆಯಿಂದ ಪತಿಯ ಬಳಿಯೇ ಇದ್ದ ಸುಮಲತಾ ತೀವ್ರ ಬಳಲಿಕೆಯಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ಮಾಡಲಾಯಿತು. ತಕ್ಷಣ ಅಲ್ಲಿಯೇ ಅವರನ್ನು ಕೂರಿಸಿ ಆರೈಕೆ ಮಾಡಲಾಯಿತು.ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಲಿದೆ. ಈ ಸಂದರ್ಭದಲ್ಲಿ ಕನ್ನಡ, ತೆಲುಗು ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕೀಯ