ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ನಟಿ ರಮ್ಯಾಗೆ ಟಿಕೆಟ್ ಕೊಡಲಾಗುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿರುವ ಹಿರಿಯ ನಟ, ಶಾಸಕ ಅಂಬರೀಷ್ ಅದನ್ನು ಈ ರೀತಿ ತೋರಿಸಿಕೊಂಡರೇ?! ನಿನ್ನೆ ಮಂಡ್ಯ ವಿಭಾಗದ ಕಾಂಗ್ರೆಸ್ ನಾಯಕರ ಜತೆ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಸಭೆ ನಡೆಸಿದ್ದರು. ಆದರೆ ಈ ಸಭೆಗೆ ಅಂಬರೀಷ್ ಗೈರಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.ಖಡಕ್ ಸೂಚನೆಯಿದ್ದರೂ ಸೊಪ್ಪು ಹಾಕದ ಅಂಬರೀಷ್ ಸಭೆಯಿಂದ ದೂರವುಳಿದಿರುವುದು ರಮ್ಯಾ ಸ್ಪರ್ಧೆ ವಿಚಾರದಲ್ಲಿ ಉಂಟಾದ