ಇಂಡೋನೇಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾಡಿದ್ದ ಘೋಷಣೆಗಳ ಮಾತುಕತೆಗೆ ಭಾರತ ಪ್ರಮುಖ ಪಾತ್ರ ವಹಿಸಿತ್ತು ಎಂದು ಅಮೆರಿಕದ ಶ್ವೇತಭವನ ಹೇಳಿದೆ. ನಿನ್ನೆ ಹೇಳಿಕೆ ಬಿಡುಗಡೆ ಮಾಡಿರುವ ಶ್ವೇತಭವನ, ಇಂದಿನ ಯುಗ ಯುದ್ಧದಿಂದ ಕೂಡಿರಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು, ಉಕ್ರೇನ್-ರಷ್ಯಾ ಯುದ್ಧ ಸಂಬಂಧ ಮೋದಿಯವರ ಹೇಳಿಕೆ ಬಗ್ಗೆ ಶ್ಲಾಘಿಸಿದೆ. ಶೃಂಗಸಭೆಯ ಘೋಷಣೆಯ ಮಾತುಕತೆಗೆ ಭಾರತ ಪ್ರಮುಖ ಪಾತ್ರ ವಹಿಸಿದೆ. ಇಂದಿನ ಯುಗವು ಯುದ್ಧದಿಂದ ಕೂಡಿರಬಾರದು ಎಂದು