ಯಡಿಯೂರಪ್ಪ ಸರ್ಕಾರದ ಮೇಲೆ ನಿಗಾವಹಿಸಲು 3 ತಂಡಗಳನ್ನು ರಚಿಸಿದ ಅಮಿತ್ ಶಾ

ಬೆಂಗಳೂರು| pavithra| Last Modified ಮಂಗಳವಾರ, 3 ಸೆಪ್ಟಂಬರ್ 2019 (11:57 IST)
ಬೆಂಗಳೂರು : ಸರ್ಕಾರದ ಚಲವಲನದ  ಮೇಲೆ ನಿಗಾ ಇರಿಸಲು ಕೇಂದ್ರ ಸಚಿವ ಅಮಿತ್ ಶಾ ಮೂರು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.
ಸಂಪುಟ ರಚನೆ, ಖಾತೆ ಹಂಚಿಕೆ ಬಳಿಕ ಬಿಜೆಪಿಯಲ್ಲಿ ಅಸಮಾಧಾನಗಳು ಬುಗಿಲೆದ್ದ ಹಿನ್ನಲೆಯಲ್ಲಿ ಇದೀಗ ಕೇಂದ್ರ ಸಚಿವ ಅಮಿತ್ ಶಾ ಅವರು, ಪ್ರಧಾನಿ ಮೋದಿ ಒಪ್ಪಿಗೆ ಪಡೆದು ಮೂರು ತಂಡಗಳನ್ನು ರಚಿಸಿದ್ದು, ಈ ತಂಡಗಳು ಮತ್ತು ಸಂಪುಟ ಸಚಿವರ ಕಾರ್ಯವೈಖರಿಯನ್ನು ಗಮನಿಸಿ ಕೇಂದ್ರಕ್ಕೆ ಮಾಹಿತಿ ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.


ಈ ಮೂಲಕ ಬಿಎಸ್ ವೈ ಸರ್ಕಾರ ಕೈಗೊಳ್ಳುವ ನಿರ್ಧಾರಗಳು, ವರ್ಗಾವಣೆ, ಪ್ರಮುಖ ಯೋಜನೆಗಳು, ಸರಿ ತಪ್ಪುಗಳನ್ನು ಈ ಮೂರು ತಂಡಗಳು  ಅಮಿತ್ ಶಾ ಅವರ ಗಮನಕ್ಕೆ ತರುತ್ತವೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :