ಬೆಳಗಾವಿ : ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಅವರ ನೇತೃತ್ವದಲ್ಲಿ ಬೆಳಗಾವಿ ನಾಯಕರ ಮಹತ್ವದ ಸಭೆ ಶನಿವಾರ ತಡರಾತ್ರಿ ನಡೆದಿದ್ದು, ಹಲವು ಖಡಕ್ ಸೂಚನೆಗಳನ್ನು ನೀಡಲಾಗಿದೆ. ಬೆಳಗಾವಿ ಭಾಗದ ಬಿಜೆಪಿಯೊಳಗಿನ ಸಂಘರ್ಷ, ರಾಜಕೀಯ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಅಮಿತ್ ಶಾ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರ ಅಂತಿಮ ತೀರ್ಪಿನ ಸಂದೇಶವಿದ್ದ ಸಭೆ ಇದಾಗಿತ್ತು. ಬೆಳಗಾವಿ ಬಣ ರಾಜಕಾರಣಕ್ಕೆ ತೆರೆ ಎಳೆಯುವ ನಿರ್ಧಾರದಿಂದಲೇ ಈ ಮಹತ್ವದ ಸಭೆಯನ್ನು