ಅಮಿತ್ ಶಾ ನನ್ನನ್ನು ಅಹಿಂದು ಎಂದು ಹೇಳ್ತಾರೆ. ಅಮಿತ್ ಶಾ ಜೈನ ಧರ್ಮದವರು. ಅವರು ಹಿಂದೂನಾ ಅಥವಾ ಅಹಿಂದುನಾ ಅಂತ ಮೊದಲು ಸ್ಪಷ್ಟಪಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅಮಿತ್ ಶಾ ಮಠಕ್ಕಾದರೂ ಹೋಗಲಿ, ಎಲ್ಲಿಗೆ ಬೇಕಾದರೂ ಹೋಗಲಿ ಅವರ ವೈಯಕ್ತಿಕ ಸ್ವಾತಂತ್ರ್ಯಆ ಬಗ್ಗೆ ನಾನೂ ಏನನ್ನು ಹೇಳುವುದಿಲ್ಲ. ಆದ್ರೆ ನಾನು ಹೋದಲೆಲ್ಲ ಅಮಿತ್ ಶಾ ಹಿಂಬಾಲಿಸುತ್ತಿದ್ದಾರೆ. ನನ್ನ ಕಂಡರೆ ಅಮಿತ್ ಶಾಗೆ ಭಯವಾಗಿರಬಹುದು ಎಂದು ಲೇವಡಿ ಮಾಡಿದರು.