ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರಸ್ತುತ ಸಮಸ್ಯೆಗಳ ವಿರುದ್ಧ ದೇಶ ಗೆಲ್ಲಲಿದೆ. ಹೀಗಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಚೀನಾ ಗಡಿಯಲ್ಲಿನ ಬಿಕ್ಕಟ್ಟಿನಲ್ಲಿಯೂ ಗೆಲುವು ನಮ್ಮದಾಗಲಿದೆ ಎಂದಿದ್ದಾರೆ. ಚೀನಾ ವೈರಸ್ ಹಾಗೂ ಚೀನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯ ದಾಖಲಿಸಲಿದೆ ಎಂದಿದ್ದಾರೆ.