ಮೈಸೂರು: ಮೊನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಸರ್ಕಾರ ನಂ.1 ಭ್ರಷ್ಟ ಸರ್ಕಾರ ಎಂದು ನಗೆಪಾಟಲಿಗೀಡಾಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಟ್ವೀಟ್ ಮಾಡಿ ಕೊನೆಗೂ ಅಮಿತ್ ಶಾ ಸತ್ಯ ಹೇಳಿದ್ದಾರೆಂದು ಲೇವಡಿ ಮಾಡಿದ್ದರು.ಆ ಘಟನೆಗೆ ಇದೀಗ ಶಾ ಪ್ರತಿಕ್ರಿಯಿಸಿದ್ದಾರೆ. ನನ್ನ ಬಾಯ್ತಪ್ಪಿನಿಂದ ಅಂತಹ ಹೇಳಿಕೆ ಬಂತು. ಸಿದ್ಧರಾಮಯ್ಯ ಎನ್ನುವ ಬದಲು ಯಡಿಯೂರಪ್ಪ ಎಂದು ಬಿಟ್ಟೆ. ಆದರೆ ರಾಹುಲ್ ಗಾಂಧಿಯವರೇ, ನಾನು ತಪ್ಪು ಮಾಡಿದರೂ