ಬೆಂಗಳೂರು: ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನರೇ ಇಲ್ಲದಿರುವುದನ್ನು ನೋಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೆಂಡಾಮಂಡಲರಾಗಿದ್ದಾರೆ. ನಿನ್ನೆ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಜನರು ಆಸೀನರಾಗಿರುವುದಕ್ಕಿಂತ ಖಾಲಿ ಕುರ್ಚಿಗಳೇ ಎದ್ದು ಕಾಣುತ್ತಿತ್ತು.ಕೆಲವು ಬಿಜೆಪಿ ನಾಯಕರು ಅಲ್ಲಲ್ಲಿ ಚದುರಿದ್ದ ಜನರನ್ನು ಕುರ್ಚಿಯಲ್ಲಿ ಕುಳ್ಳಿರಿಸಲು ಪ್ರಯತ್ನ ನಡೆಸಿದ್ದೂ ಆಯ್ತು. ಬಿಎಸ್ ಯಡಿಯೂರಪ್ಪ ತಮ್ಮ ಭಾಷಣದಲ್ಲಿ