ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ನಂತರ ಇದೀಗ ಬಿಜೆಪಿ ಕಣ್ಣು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯತ್ತ ಹೊರಳಿದೆ. ಇದಕ್ಕಾಗಿ ಕರ್ನಾಟಕದ ಜನರನ್ನು ಸೆಳೆಯಲು ಮೋದಿ-ಶಾ ಜೋಡಿ ಭರ್ಜರಿ ಯೋಜನೆ ರೂಪಿಸಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಹಾದಿ ಸುಗಮವಾಗಿಲ್ಲ. ಇಲ್ಲಿ ನಾಯಕರ ಮುಖ ನೋಡಿ ಓಟು ಹಾಕಲ್ಲ ಎಂದು ತಿಳಿದಿರುವ ಮೋದಿ-ಶಾ ಜೋಡಿ ನೀರಿನ ಸಮಸ್ಯೆಯ ಪರಿಹಾರಕ್ಕೇ ಕೈ ಹಾಕಿದೆ.ಇಷ್ಟು ದಿನ ಮಹದಾಯಿ ನೀರಿನ