ಬೆಂಗಳೂರು: ಮೇ 15 ರ ನಂತರ ಕೆಜೆ ಜಾರ್ಜ್, ರೋಷನ್ ಬೇಗ್, ಹ್ಯಾರಿಸ್ ಮುಕ್ತ ಬೆಂಗಳೂರು ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಈ ಎಲ್ಲಾ ಶಾಸಕರಿಗೆ ಜನರು ಮನೆ ದಾರಿ ತೋರಿಸಲಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.ಈ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಕೂಡಾ ಮನೆಗೆ ಹೋಗಬೇಕಾಗುತ್ತದೆ.