ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ ಇಂದು ಹೆಲಿಕಾಪ್ಟರ್ ಮಾರ್ಗವಾಗಿ ತುಮಕೂರಿಗೆ ತೆರಳಲಿದ್ದಾರೆ. ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಳಿಕ ತಿಪಟೂರಿನಲ್ಲಿ ನಡೆಯುವ ತೆಂಗು ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ.ಸಂಜೆ ಶಿವಮೊಗ್ಗಕ್ಕೆ ತೆರಳಿ, ಈಶ್ವರಪ್ಪ ನಿವಾಸದಲ್ಲಿ ಬಿಎಸ್ ವೈ ಮತ್ತಿತರ ನಾಯಕರೊಂದಿಗೆ ಭೋಜನ ಕೂಟದಲ್ಲಿ