ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದರೂ ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತ ಚಟುವಟಿಕೆಗಳಿಂದ ಸಿಟ್ಟಿಗೆದ್ದಿರುವ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಇಲ್ಲದ ರಗಳೆ ತಂದುಕೊಳ್ಳಬೇಡಿ ಎಂದು ಅಮಿತ್ ಶಾ, ನಿನ್ನೆ ರಾತ್ರಿ ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾಗ ಉಭಯ ನಾಯಕರಿಗೂ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.ಬಹಿರಂಗವಾಗಿ ಇಲ್ಲದ ಹೇಳಿಕೆ ನೀಡಬೇಡಿ. ವಿವಾದ ಸೃಷ್ಟಿಸಬೇಡಿ. ಈ ಚುನಾವಣೆಯ ಜವಾಬ್ದಾರಿ ನೀವು ಇಬ್ಬರೂ ನಾಯಕರದ್ದು. ಬಿಜೆಪಿ