ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣದಲ್ಲಿ ಮಾಜಿ ಎಡಿಜಿಪಿ ಅಮೃತ್ ಪೌಲ್ಗೆ ಸಂಕಷ್ಟ ಇನ್ನು ಮುಗಿದಿಲ್ಲ. ಅತಿಯಾದ ಒಂಟಿತನದಿಂದ ಡಿಪ್ರೆಶನ್ಗೆ ಹೋಗಿರುವ ಅಮೃತ್ ಪೌಲ್ಗೆ ಜೈಲಾಧಿಕಾರಿಗಳು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ಹಿರಿಯ ಅಧಿಕಾರಿ ಜೈಲು ಸೇರಿದ್ದೆ ಸೇರಿದ್ದು, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಅದೆಷ್ಟೋ ಆರೋಪಿಗಳ ಜೈಲಿಗೆ ಕಳುಹಿಸಿದ್ದ ಅಮೃತ್ ಪೌಲ್ ಅದೇ ಆರೋಪಿಗಳ ಜೊತೆ ಕಾಲ ಕಳೆಯುವಂತೆ ಆಗಿದೆ.ಆರೋಪಿಗಳ ಜೊತೆ ಬೆರೆಯುವುದಕ್ಕೂ ಆಗದೆ ಒಂಟಿತನ ಅನುಭವಿಸುತ್ತಿದ್ದಾರೆ.