ಚಿತ್ರರಂಗದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಟಾಲಿವುಡ್ ನಿರ್ಮಾಪಕರ ಸಂಘ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದೆ. ಇಂದಿನಿಂದ (ಆಗಸ್ಟ್ 1) ಸಿನಿಮಾ ಶೂಟಿಂಗ್ ನಿಲ್ಲಿಸುವುದಾಗಿ ನಿರ್ಧರಿಸಿದೆ. ಇತ್ತೀಚೆಗಷ್ಟೇ ಹೈದರಾಬಾದ್ನ ಫಿಲಂ ಚೇಂಬರ್ನಲ್ಲಿ ಟಿಕೆಟ್ ದರ, ಒಟಿಟಿ ಬಿಡುಗಡೆ, ಕಾರ್ಮಿಕರ ದಿನಗೂಲಿ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಭೆ ನಡೆಸಿದ್ದರು. ಈ ವೇಳೆ, ಎಲ್ಲ ನಿರ್ಮಾಪಕರು ಸ್ವಯಂಪ್ರೇರಣೆಯಿಂದ ಆಗಸ್ಟ್ 1 ರಿಂದ ಚಿತ್ರೀಕರಣ ತಡೆಹಿಡಿಯುವುದಾಗಿ ನಿರ್ಧರಿಸಿದ್ದರು. ಅದರಂತೆ ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ತೆಲುಗು