ಪ್ರವಾದಿ ಮೊಹಮ್ಮದರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡಲು ರಷ್ಯಾದಲ್ಲಿ ಸೆರೆ ಸಿಕ್ಕ ಐಸಿಸ್ ಉಗ್ರ ಮುಂದಾಗಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ ಬಂಧಿತನಾಗಿರುವ ಐಸಿಸ್ ಉಗ್ರ ಅಜಮೋವ್ ಆತ್ಮಾಹುತಿ ದಾಳಿ ಮೂಲಕ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಯೋಜನೆಯನ್ನು ಮಾಡಿಕೊಂಡಿದ್ದ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದೆ. ಅಜಮೊವ್ ಟರ್ಕಿಯಲ್ಲಿ ಐಎಸ್ನಿಂದ ನೇಮಕಗೊಂಡು ತರಬೇತಿ ಪಡೆದಿದ್ದ.