ರೈತರೊಬ್ಬರಿಂದ ಲಂಚದ ಹಣ ಪಡೆಯುವಾಗಿ ಅಧಿಕಾರಿಯೊಬ್ಬರು ಎಸಿಬಿ ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗಾ ಹೋಬಳಿ ದಾಸಲುಕುಂಟೆ ಗ್ರಾಮದ ನಿವಾಸಿ ಮಂಜುನಾಥ್ ಎಂಬ ರೈತನಿಂದ 15 ಸಾವಿರ ರೂ.ಗಳ ಲಂಚದ ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಚನ್ನೇಗೌಡ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ.ದಾಸಲುಕುಂಟೆ ಗ್ರಾಮದ ಮಂಜುನಾಥ್ ಅವರ ತಾಯಿ ನಾಗರತ್ನಮ್ಮ ಅವರ ಹೆಸರಿಗೆ ಕ್ರಯವಾಗಿರುವ ದಾಸಲುಕುಂಟೆ ಗ್ರಾಮದ ಸರ್ವೇ ನಂ.34 ರ ಎರಡು ಎಕರೆ