ಮಂಡ್ಯ : ನನ್ನ ಹೊಡೆದು ಹಾಕಲು 50 ಲಕ್ಷ ಸುಪಾರಿ ನೀಡಲಾಗಿದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು ಕೆ.ಆರ್.ಪೇಟೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನನ್ನು ಹೊಡೆದು ಹಾಕಬೇಕು ಎಂದು ಕೆ.ಆರ್.ಪೇಟೆಯಲ್ಲಿ 50 ಲಕ್ಷ ಕ್ಕೆ ಸುಪಾರಿ ನೀಡಿದ್ದರು. ಆದರೆ ದೇವರ ದಯೆಯಿಂದ ಯಾರಿಗೂ ನನ್ನನ್ನು ಏನು ಮಾಡಲು ಆಗಲಿಲ್ಲ. ಈ ವಿಚಾರ ತಿಳಿದರೂ ನನ್ನ ಜೊತೆ ಗನ್ ಮ್ಯಾನ್ ನನ್ನು ಇಟ್ಟುಕೊಂಡಿಲ್ಲ ಎಂದು ಸ್ಫೋಟಕ