ಆನಂದ್ ಸಿಂಗ್ ಮತ್ತು ಮಾಧುಸ್ವಾಮಿ ಖಾತೆ ಬದಲಾವಣೆ; ಸಚಿವರು ಹೇಳಿದ್ದೇನು?

ಬೆಂಗಳೂರು| pavithra| Last Modified ಸೋಮವಾರ, 25 ಜನವರಿ 2021 (12:15 IST)
ಬೆಂಗಳೂರು : ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಬದಲಾವಣೆಯಿಂದ ಸಚಿವರಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತೆ ಖಾತೆ ಅದಲು ಬದಲು ಮಾಡಲು ಹೊರಟಿದ್ದು, ಇದ್ದಕ್ಕೂ ಕೂಡ ಕೆಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಚಿವ ಮಾಧುಸ್ವಾಮಿ ಬಳಿಯಿದ್ದ ವೈದ್ಯಕೀಯ ಖಾತೆ , ಹಜ್, ವರ್ಕ್ಸ್ ಖಾತೆಯನ್ನು ವಾಪಾಸ್ ಪಡೆಯಲು ಹಾಗೂ  ಸಚಿವ ಆನಂದ್ ಸಿಂಗ್ ಬಳಿಯಿದ್ದ ಪ್ರವಾಸೋದ್ಯಮ, ಪರಿಸರ ಖಾತೆ ಕೂಡ ವಾಪಾಸ್ ಪಡೆಯಲು ಸಿಎಂ ಚಿಂತನೆ ಮಾಡಿದ್ದಾರೆ. ಸಚಿವ ಆನಂದ್ ಸಿಂಗ್ ಗೆ ಮೂಲಸೌಕರ್ಯ ಅಭಿವೃದ್ಧಿ ಖಾತೆ, ಹಜ್, ವರ್ಕ್ಸ್ ಖಾತೆ ನೀಡಲು ಸಿಎಂ ಮುಂದಾಗಿದ್ದಾರೆ. ಆದರೆ ಆನಂದ್ ಸಿಂಗ್ ಅವರಿಗೆ ಹಜ್, ವರ್ಕ್ಸ್ ಖಾತೆ ಬಗ್ಗೆ ವಿರೋಧವಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಹಾಗೇ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ ಅವರು, ನನ್ನ ಬಳಿ ಇದ್ದ ಖಾತೆ ವಾಪಾಸ್ ಪಡೆದ ಬಗ್ಗೆ ಮಾಹಿತಿ ಇಲ್ಲ. ನಾಳೆಯವರೆಗೂ ಕಾದು ನೋಡಿ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :