ಬೆಂಗಳೂರು-ಹಿಂದು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಹಾಗಾಗಿ, ಮಸೀದಿಗಳನ್ನು ಧ್ವಂಸ ಮಾಡಿ ದೇವಸ್ಥಾನಗಳನ್ನು ಕಟ್ಟಬೇಕು ಎಂದು ಅವನ್ಯಾರೋ ಮೂರ್ಖ ಹೇಳುತ್ತಾನೆ. ದಾರಿ ತಪ್ಪಿಸುವ ಇಂತಹ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ’ ಎಂದು ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.