ಸಿಎಂ ಸಿದ್ದರಾಮಯ್ಯ ವೋಟ್ಬ್ಯಾಂಕ್ಗಾಗಿ ಯಾರ ಬೂಟ್ ಬೇಕಾದ್ರೂ ನೆಕ್ತಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೊಬ್ಬ ಬಿಜೆಪಿ ಶಾಸಕನಂತೆ ನಾಲಿಗೆ ಹರಿಬಿಟ್ಟಿದ್ದಾರೆ. ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಜಯಗಳಿಸಲು ಮುಸ್ಲಿಮರ ಓಲೈಕೆಯಲ್ಲಿ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯ ಸರಕಾರದ ಪರವಾಗಿ ಟಿಪ್ಪು ಜಯಂತಿ ಆಚರಿಸುವ ಸರಕಾರಕ್ಕೆ ರಾಣಿ ಕಿತ್ತೂರ್ ಚೆನ್ನಮ್ಮ, ರನ್ನ ಪಂಪ ಅವರ ಜಯಂತಿ