ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಮಹಿಳೆ ಕೊಂದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಮಂಡ್ಯ ಮೂಲದ ಕೌಸರ್ ಮುಬೀನಾ ಅವರನ್ನು ಹತ್ಯೆಗೈದ ಆರೋಪದಡಿ ಲಿವಿಂಗ್ ಟೂ ರಿಲೇಷನ್ ನಲ್ಲಿದ್ದ ನದೀಂ ಪಾಷ ಅವರನ್ನು ಬಂಧಿಸಲಾಗಿದೆ.ಕೌಸರ್ ಹಾಗೂ ನದೀಂಪಾಷ ಇಬ್ಬರಿಗೂ ಈ ಹಿಂದೆ ಪ್ರತ್ಯೇಕವಾಗಿದ್ದು ದಾಂಪತ್ಯದಿಂದ ದೂರವಾಗಿದ್ದರು. ದೂರದ ಸಂಬಂಧಿಕರಾಗಿದ್ದ ಕೌಸರ್ ನೊಂದಿಗೆ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿ ಕಳೆದೊಂದು ವರ್ಷದಿಂದ ನದೀಂ ಜೊತೆಯಲ್ಲಿ ವಾಸವಾಗಿದ್ದ. ಅಶೋಕನಗರದ ನಂಜಪ್ಪ ಸರ್ಕಲ್ ನಲ್ಲಿ