ಡೇಟಿಂಗ್ ಆ್ಯಪ್ ಎಂದು ಕರೆಯಲಾಗುವ ಲೊಕ್ಯಾಂಟೊ ಆ್ಯಪ್ನಲ್ಲಿ ಮಹಿಳೆಯರ ನಕಲಿ ಪೋಟೊ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮವಾಗಿ ಹಣ ಸಂಪಾದನೆಯಲ್ಲಿ ಮಾಡುತ್ತಿದ್ದ ಆರು ಮಂದಿ ದಂಧೆಕೋರರನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಸೆರೆಹಿಡಿದಿದ್ದಾರೆ. ಗ್ರಾಹಕರು ನೀಡಿದ ದೂರು ಆಧರಿಸಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಮಂಜುನಾಥ್,ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಎಂಬುವರನ್ನು ಬಂಧಿಸಲಾಗಿದೆ. ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಜಾಲದಲ್ಲಿದ್ದ ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.