ಪೊಲೀಸ್ ಎಂದು ಹೇಳಿಕೊಂಡು ಪಾರ್ಕ್ ನಲ್ಲಿ ಕುಳಿತಿದ್ದ ಯುವಕ,ಯುವತಿಯಿಂದ ಒಂದು ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ದ ಹೋಂಗಾರ್ಡ್ ನನ್ನು ಹೆಚ್ ಎಲ್ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ. ಇದೇ ತಿಂಗಳ 29ರಂದು ಅರ್ಷಾ ಲತೀಫ್ ಎಂಬ ಯುವತಿ ಕುಂದಲಹಳ್ಳಿಯ ಕೆರೆ ಬಳಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತ ಕುಳಿತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹೋಂ ಗಾರ್ಡ್ ಮಂಜುನಾಥ್ ರೆಡ್ಡಿ, ಇಬ್ಬರ ಫೋಟೋ ಕ್ಲಿಕ್ಕಿಸಿಕೊಂಡು ಇಲ್ಲಿ ಯಾಕೆ ಕುಳಿತಿದ್ದೀರಿ ಎಂದು ವಿಚಾರಿಸಿದ್ದ. ನಂತರ ಸ್ಟೇಷನ್ ಗೆ ಬರುವಂತೆ ಹೆದರಿಸಿದ್ದ.ಪಾರ್ಕ್ ನಲ್ಲಿ ಕುಳಿತುಕೊಳ್ಳಲು ಪರ್ಮಿಷನ್ ಬೇಕು,