ಕಲಬುರ್ಗಿ: ಶ್ರೀರಾಮಸೇನೆ ರಾಜ್ಯ ಗೌರವಾಧ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗಸ್ವಾಮಿಜಿ ಬಂಧನ ಖಂಡಿಸಿ ಶ್ರೀರಾಮಸೇನಾ ಅಧಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಲವು ಮಠಾಧೀಶರು, ಕಾರ್ಯಕರ್ತರು ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆಂದೋಲಾ ಶ್ರೀಗಳ ಬಂಧಿಸುವ ಮೂಲಕ ಹಿಂದುತ್ವ ಧಮನ ಮಾಡಲು ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜೇವರ್ಗಿ ಶಾಸಕ ಅಜಯಸಿಂಗ್ ಹುನ್ನಾರ ನಡೆಸಿದ್ದಾರೆ. ಅವರ ಕುಮ್ಮಕ್ಕಿನಿಂದ ಆಂದೋಲಾ ಶ್ರೀಗಳನ್ನು